Skip to product information
1 of 2

Jogi

ಮಗಳಿಗೆ ಬರೆಯದ ಪತ್ರಗಳು

ಮಗಳಿಗೆ ಬರೆಯದ ಪತ್ರಗಳು

Publisher - ಸಾವಣ್ಣ ಪ್ರಕಾಶನ

Regular price Rs. 94.00
Regular price Rs. 120.00 Sale price Rs. 94.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 100

Type - Paperback

ಮಗಳೇ.

ನಿನಗೆ ಪತ್ರ ಬರೆಯುವಾಗ ಮನಸ್ಸು ನಾನಾ ಥರ ಯೋಚಿಸುತ್ತದೆ. ನನ್ನ ಬಾಲ್ಯದಲ್ಲಿ ದೊಡ್ಡವರು ನಮ್ಮನ್ನು ನೋಡುವ ರೀತಿಯೇ ಬೇರೆಯಿತ್ತು. ಹೆಣ್ಣುಮಕ್ಕಳನ್ನು ಮತ್ತಷ್ಟು ಎಚ್ಚರಿಕೆಯಿಂದ ಗಮನಿಸುತ್ತಿದ್ದರು. ನಾವು ತಪ್ಪು ಮಾಡುತ್ತೇವೆ ಮತ್ತು ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುತ್ತೇವೆ ಅನ್ನುವ ಆತಂಕ ದೊಡ್ಡವರಲ್ಲಿತ್ತು. ಅಷ್ಟಿದ್ದರೂ ಅವರು ನನಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಪ್ರತಿಯೊಂದಕ್ಕೂ ಅಡ್ಡಿ ಮಾಡುತ್ತಿರಲಿಲ್ಲ. ನನ್ನ ನಿರ್ಧಾರಗಳನ್ನು ಗೌರವಿಸುತ್ತಿದ್ದರು.

ಅಂಥ ಸ್ವಾತಂತ್ರ್ಯ ನಿನಗೂ ಸಿಗಬೇಕು ಅನ್ನುವುದು ನನ್ನಾಸೆ. ನನ್ನ ಪ್ರಕಾರ ಸ್ವಾತಂತ್ರ್ಯವನ್ನು ಬೇರೆ ಯಾರೂ ಕೊಡಲಿಕ್ಕಾಗುವುದಿಲ್ಲ, ನಾವೇ ಅದನ್ನು ಗಳಿಸಿಕೊಳ್ಳಬೇಕು. ಪರಸ್ಪರ ನಂಬಿಕೆ ಇದ್ದಲ್ಲಿ ಮುಕ್ತತೆಯೂ ಇರುತ್ತದೆ. ಯಾರೂ ನಿನ್ನನ್ನು ಪ್ರಶ್ನಿಸಬಾರದು ಅನ್ನುವುದು ನಿನ್ನಾಸೆಯಾದರೆ, ನೀನು ದೇಶದ ಕಾನೂನನ್ನು ಉಲ್ಲಂಘಿಸಬಾರದು.

ಪ್ರತಿಯೊಂದು ಮನೆಗೂ ಅದರದ್ದೇ ಆದ ನಿಯಮಾವಳಿ ಇರುತ್ತದೆ. ಓದು, ಪ್ರವಾಸ, ವೃತ್ತಿ, ಮದುವೆ ಮುಂತಾದ ವಿಚಾರಗಳಲ್ಲಿ ಬೇರೆಯವರು ಅವರವರ ಅಭಿಪ್ರಾಯವನ್ನು ಹೇರುತ್ತಾರೆ. ನೀನು ಅಂದುಕೊಂಡದ್ದು ನಡೆಯುವುದಿಲ್ಲ. ಉಲ್ಲಂಘಿಸಿದರೆ ನಿನ್ನನ್ನು ಹೊರಗಿಡುತ್ತಾರೆ. ಒಪ್ಪಿಕೊಂಡು ನಡೆದರೆ ನಿನ್ನ ಭಾವನೆಗಳನ್ನು ಬಲಿಕೊಡಬೇಕಾಗುತ್ತದೆ. ಇಂಥ ಸಂದಿಗ್ಧವನ್ನು ನಿಭಾಯಿಸಲು ಕಲಿತುಕೋ ಅನ್ನುವುದಷ್ಟೇ ನನ್ನ ವಿನಂತಿ.

ಸಣ್ಣವಳಿದ್ದಾಗ ಒಂದು ಸಲ ಕಾರಿನಲ್ಲಿ ಶಿರಾಡಿ ಘಾಟಿ ಹತ್ತುತ್ತಿದ್ದಾಗ, ನೀನು ಘಾಟಿಯ ಬುಡದಿಂದ ಎತ್ತರಕ್ಕೆದ್ದು ನಿಂತ ಬೆಟ್ಟವನ್ನು ನೋಡುತ್ತಾ, ಗಾಬರಿಯಾಗಿ ಕಣ್ಮುಚ್ಚಿ ಮಲಗಿಬಿಟ್ಟೆ. ನೀನು ಏಳುವ ಹೊತ್ತಿಗೆ ನಾವು ಬೆಟ್ಟದ ತುದಿಗೆ ಏರಿದ್ದೆವು. ಆಗ ನೀನು ಆಶ್ಚರ್ಯದಿಂದ ಹತ್ತಿದ ಮೇಲೆ ಬೆಟ್ಟವೇ ಇಲ್ಲ ಅಂದಿದ್ದೆ.

ನಿನಗೆ ಈಗಲೂ ಹಾಗೆಯೇ ಅನ್ನಿಸುತ್ತಿರಲಿ ಏರುವ ಮೊದಲು ಬೆಟ್ಟವನ್ನು ನೋಡಬೇಡ ಏರಿದ ನಂತರ ಬೆಟ್ಟ ಇರುವುದೇ ಇಲ್ಲ. ಏರುವ ಖುಷಿ ಮಾತ್ರ ನಿನ್ನದಾಗಿರಲಿ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)